Tuesday, December 12, 2006

ಇದು (ದಿ) ಹಿಂದು ರಾಮಾಯಣ ಕಥೆ!

ಇದು ತನ್ನ ಪತ್ರಿಕೆಯ ಶಿರಭಾಗದಲ್ಲಿ ಹಿಂದು ಎಂಬ ಫಲಕ ಹಾಕಿ ಅದರಡಿಯಲ್ಲೆಲ್ಲ ಹಿಂದು ವಿರೋಧಿ ವಿಚಾರ ತುಂಬುವ ಪತ್ರಿಕೆಯೊಂದರ ಕಥೆ!

ನಿಮಗೆಲ್ಲ ತಿಳಿದಂತೆ, ಕೆಲವು ಬರಹಗಾರರಿದ್ದಾರೆ. ಹಿಂದುಗಳನ್ನು/ ಹಿಂದುತ್ವಕ್ಕಾಗಿ, ಹಿಂದುಗಳ ಆತ್ಮವಿಶ್ವಾಸ ಪುನಸ್ಥಾಪನೆಗಾಗಿ, ಹಿಂದುತ್ವದ ಪುನರುತ್ಥಾನಕ್ಕಾಗಿ, ಸಾಮಾಜಿಕ ಸಾಮರಸ್ಯಕ್ಕಾಗಿ ಕೆಲಸ ಮಾಡಿದವರನ್ನು ಟೀಕಿಸುವುದೇ ಜಾತ್ಯಾತೀತತೆ ಎಂದುಕೊಂಡಿರುತ್ತಾರೆ. (ನಾವದನ್ನ ಜಾತ್ಯತೀತ ವ್ಯಾಧಿ ಎನ್ನುತ್ತೇವೆ).

ಎಲ್ಲ ಪತ್ರಿಕೆಗಳಂತೆ "ದಿ ಹಿಂದು" ಎಂಬ ಪತ್ರಿಕೆಯಲ್ಲೂ ಅಂತಹ ಮಂದಿ ಸಾಕಷ್ಟಿದ್ದಾರೆ. ತಾನು ಮಾರ್ಕ್ಸ್ ವಾದಿಯೆಂದು ಬಹಿರಂಗವಾಗಿಯೇ ಹೇಳಿಕೊಳ್ಳುವ ಆ ಪತ್ರಿಕೆಯ ಮುಖ್ಯ ಸಂಪಾದಕ "ಎನ್ ರಾಮ್" ಎಂಬವರಂತೂ ಅಯೋಧ್ಯೆಯ ಹೆಸರೆತ್ತಿದರೂ ಜಾತ್ಯತೀತ ವ್ಯಾಧಿಯಿಂದ ನರಳುತ್ತಾರೆ. "ಹಿಂದು" ಪತ್ರಿಕೆಗೆ ಸರಿಯಾದ "ರಾಮ"!

ವಿಷಯಕ್ಕೆ ಬರುವ ಮುಂಚೆ ಇನ್ನೊಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು. ಅವರ ಹೆಸರು "ರಾಮಚಂದ್ರ" ಗುಹ. ರಾಮ ರಾಮ! ಇವರಿಗೆ ಇಂತಹ ಹೆಸರನ್ನು ಯಾರಿಟ್ಟರೊ? ಎಲ್ಲ ಜಾತ್ಯತೀತವ್ಯಾಧಿಗಳಂತೆ ಈತನೂ ಸೂರ್ಯನ ಕೆಳಗಿರುವುದನನ್ನೆಲ್ಲವನ್ನೂ, ಎಲ್ಲರನ್ನೂ "ದ್ವೇಷಿಸುತ್ತಾನೆ", ಭಯೋತ್ಪಾದಕರನ್ನು ಹೊರತುಪಡಿಸಿ!
"ನಾನು ನನ್ನ ಲೇಖನವೊಂದರಲ್ಲಿ ಸ್ಟಾಲಿನ್ ಅತಿದೊಡ್ಡ ಕ್ರಿಮಿನಲ್ ಎಂದು ಜರೆದಿದ್ದೇನೆ" ಎಂದು ನನ್ನ ಗೆಳೆಯನೊಬ್ಬನ ಪತ್ರಕ್ಕೆ ಈತ ಹೆಮ್ಮೆಯಿಂದು ಉತ್ತರಿಸಿದ್ದ! ಆತನ ಲೇಖನ ಇಷ್ಟವಾಗಲಿಲ್ಲ ಎಂದು ನೀವೂ ಪತ್ರ ಬರೆದು/ ಇ-ಮೇಲ್ ಮಾಡಿ ನೋಡಿ. ಆತನ ದ್ವೇಷಿಸುವ(hate) ಸ್ವಭಾವ ಆತನ ಉತ್ತರದಲ್ಲೇ ನಿಮಗೇ ಅರ್ಥವಾಗುತ್ತದೆ!

ನಿವೃತ್ತ ಐಏಎಸ್ (IAS)ಅಧಿಕಾರಿ ವಿ. ಸುಂದರಂ ಅವರ ಪತ್ರಕ್ಕೆ ಉತ್ತರಿಸುತ್ತ, ತಮ್ಮ"inbox was inundated with mails" ಎಂದು ಅವರೇ ಸಿಟ್ಟಿನಿಂದ ಹೇಳಿದ್ದಾರೆ. ಅವರ ಪ್ರಕಾರ ಅದೇಲ್ಲ "hate mail"ಗಳು. ಅಷ್ಟೊಂದು "hate mail"ಗಳು ಬರಬೇಕಾದರೆ ಅವರ ಬರಹ ಹೇಗಿರಬಹುದೆಂದು ನೀವೇ ಊಹಿಸಬಹುದು.

ಉಳಿದ ಲದ್ದಿಜೀವಿಗಳಿಗಿಂತ ಈತ ಒಂದು ವಿಚಾರದಲ್ಲಿ ಮಾತ್ರ ಭಿನ್ನ. ಈತ ಕಮ್ಯುನಿಸಂ ಒಂದು "bad theory" ಎಂದು ಹೇಳುತ್ತಾನೆ( http://indiatogether.org/2005/jul/rgh-leftpols.htm ). ಆದರೆ ಭಾರರೀಯ ಕಮ್ಯುನಿಷ್ಠರು ಸಿದ್ಧಾಂತಕ್ಕೆ ಭಿನ್ನರಾಗಿ, ಉತ್ತಮರಂತೆ! (ಇದರ ಬಗ್ಗೆ ನನ್ನ ಟಿಪ್ಪಣಿ ಅಗತ್ಯವಿಲ್ಲ.)
ಇನ್ನೊಂದು ಲೇಖನದಲ್ಲಿ ಬರೆದಿರುವ ವಿಶ್ಲೇಷಣೆ ಹೀಗಿದೆಃ "And there still are fears that India might break up, these caused by the rising force of threats to the idea of India which has, for some sixty years, held this nation together. Of these threats I myself hold three to be most dangerous; those of Hindu chauvinism, of assorted caste chauvinisms, and of the corruption and degradation of public institutions". ದೇಶಕ್ಕೆ ಭತಯೋತ್ಪಾದನೆ, ಇಸ್ಲಾಂ ಪ್ರತ್ಯೇಕತಾವಾದಗಳು ಭಯಾನಕವೆದು ಆತನಿಗೆ ಅನ್ನಿಸಲೇ ಇಲ್ಲ. ಅಯ್ಯೋ ರಾಮ!
ಇರಲಿ, ಅದೇ ಜಾತ್ಯತೀತ ವ್ಯಾಧಿ!

ನಾನು ಈಗ ಹೇಳಹೋರಟಿರುವುದು, ಆ ರಾಮ ನ(ಹಿಂದು ರಾಮ್) ಪತ್ರಿಕೆಯಲ್ಲಿ ಈ ರಾಮ (ಹೇಟ್ ರಾಮ) ಇತ್ತೀಚಿಗೆ ಬರೆದ ಲೇಖನದ ಕುರಿತು. ಆ ಲೇಖನದ ಹೆಸರು "ದ್ವೇಷದ ಗುರು" ಅಥವಾ "ದಿ ಗುರು ಆಫ್ ಹೇಟ್".

ಅವರು ಬರೆದಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕರಾದ ಗುರೂಜೀ ಬಗ್ಗೆ. ಅವರ ವಿಚಾರಗಳುಳ್ಳ "ಬಂಚ್ ಆಫ್ ಥಾಟ್ಸ್" ಪುಸ್ತಕವನ್ನು ಉಲ್ಲೇಖಿಸಿ. ಗುರೂಜಿಯ ಬಗ್ಗೆ ಹೇಟ್ ಲೇಖನ ಬರೆಯಬೇಕೆಂಬ ಒಂದೇ ಉದ್ದೇಶದಿಂದ ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲೆಲ್ಲಾ ಹುಡುಕಾಡಿ ತೆಗೆದ ಕೆಲವು ವಾಕ್ಯಗಳನ್ನು ಉಲ್ಲೇಖಿಸಿ ಅವರನ್ನು ದ್ವೇಶದ ಗುರು ಎಂದು ಸಾಧಿಸುವುದು ಈ ರಾಮ ಗುಹನ ಉದ್ದೇಶ.

ಬಂಚ್ ಆಫ್ ಥಾಟ್ಸ್ ಒಮ್ಮೆ ಓದಿ ನೋಡಿ, ಇಲ್ಲಿದೆ.

ಅದರಲ್ಲಿ ದೇಶದ ಪ್ರಸ್ತುತ ಸಮಸ್ಯೆಗಳನ್ನು ಉಲ್ಲೇಖಿಸುತ್ತಾ, ಇಸ್ಲಾಂ, ಕ್ರಿಶ್ಚಿಯನ್ ಮತ್ತು ಕಮ್ಯುನಿಸಂ ಅಪಾಯಗಳ ಬಗ್ಗೆ ತಿಳಿಸಿದ್ದರು. ಇದನ್ನೇ ಹುಡುಕಿ ತೆಗೆದು ಬರೆದಿದ್ದು "ದ್ವೇಶದ ಗುರು"!

ಲೇಖನದ ಬೈ-ಲೈನ್ ಗುರೂಜಿ ಪ್ರಜಾಪ್ರಭುತ್ವದ ವಿರೋಧಿ ಹಾಗೂ ಅವರ ಪುಸ್ತಕ ಮನುಸ್ಮೃತಿಯನ್ನು ಬೆಂಬಲಿಸುತ್ತದೆ ಎಂದಿತ್ತು. ಆದರೆ ಎಲ್ಲಿತ್ತು ಎಂಬುದನ್ನು ಲೇಖನದಲ್ಲೆಲ್ಲೂ ಬರೆದಿರಲಿಲ್ಲ. ನಾನಂತೂ ಬಂಚ್ ಆಫ್ ಥಾಟ್ಸ್ ಎಲ್ಲಾ ಹುಡುಕಿದೆ, ಎಲ್ಲೂ ಮನುವಿನ ಉಲ್ಲೇಖ ಸಿಗಲಿಲ್ಲ.

ಆ ಲೇಖನವನ್ನು ಓದಿದಾಗ ಸಿಕುಲರ್ ಅನ್ನಿಕೊಳ್ಳುವುದಕ್ಕಾಗಿ ಇವರು ಹಿಂದುಗಳ ಉನ್ನತಿಗಾಗಿ ದುಡಿವ ಎಲ್ಲರನ್ನೂ ದ್ವೇಶಿಸುತ್ತಾರೋ ಅಲ್ಲ, ಅವರ ದ್ವೇಶಭರಿತ ಸ್ವಭಾವದಿಂದಾಗಿ ಸಿಕುಲರ್ ಅನ್ನಿಸಿಕೊಳ್ಳುತ್ತಾರೋ ಅರ್ಥವಾಗಲಿಲ್ಲ.

ಏನೇ ಆಗಲಿ, ಆ ರಾಮ,ಈ ರಾಮರಿಂದಾಗಿ ಓದುಗರಿಗೆ ಆ"ರಾಮ" ಇಲ್ಲದಾಗಿದೆ. ಅದಕ್ಕಾಗಿ ದಿ ಹಿಂದುವಿಗೆ ಪೂರ್ಣ ವಿ"ರಾಮ" ಹಾಕಬೇಕಿದೆ!

3 comments:

Kesari said...

"The RSS is the Hindu nationalist organization that everybody in the West loves to hate. Whenever a disaster strikes they are the first ones to reach the area and do the lowest work that no one else wants to do. They have members from all castes.

The Hindu newspaper is one of the oldest newspapers of India with a marked leftist / Marxist bias despite its name. They do their best to not report anything good about Hindu organisations.

Following an SOS from Nagapattinam district collector, RSS sent volunteers from all over the State to the affected areas. The volunteers performed funeral rites to 1,100 bodies recovered from the tsunami-hit areas in this district alone. The relief works in Kanyakumari district were coordinated with the Ramakrishna Mission and a medical camp is functioning with doctors and volunteers.

Of course none of the Western press will publish these news items because these go against their pre-conceived notions of painting Indians as a backward caste-ridden society."

http://www.hinduwisdom.info/Glimpses_XII.htm ದಿಂದ


When the Indian artist MF Hussain, painted some Hindu goddesses nude, The Hindu defended him in the name of freedom of expression. However, it adopted a completely opposite stand in the Mohammed cartoons incident in which a Danish newspaper published some cartoons of the Islamic Prophet.[17]

ವಿಕಿಪೀಡಿಯದಿಂದ

Kesari said...

ಕನ್ನಡದ 'ದಿ ಹಿಂದು' 'ಪ್ರಜಾವಾಣಿ'ಯೇ???

prabhakar said...

Those who support the right of Indian artist MF Hussain to paint Hindu goddesses in nude in the name of freedom of expression, should also adopt the same stand with regard to the right of Danish newspaper in publishing the Mohammed cartoons. Any dispute?

Also, they should urge the same Hussain to paint Mohammed using his freedom of expression so that he is also known to be a secular painter. Any dispute?
From:
www.prabhakarsays.blogspot.com