Saturday, October 28, 2006

ಕರ್ನಾಟಕದಲ್ಲೂ ಭಯೋತ್ಪಾದಕರು!

ಭಯೋತ್ಪಾದಕರು ಕರ್ನಾಟಕದಲ್ಲೂ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆಂಬುದು ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಬಂಧನದಿಂದಾಗಿ ಸ್ಪಷ್ಟವಾಗಿದ್ದು ಇದು ಜಾತ್ಯಾತೀತವ್ಯಾಧಿಗಳಿಗೆ ಸಿಹಿ-ಕಹಿಯ ಸುದ್ದಿಯಾಗಿದೆ.
http://www.financialexpress.com/fe_full_story.php?content_id=144736

ಬಹುತೇಕ ಭಯೋತ್ಪಾದಕರೂ ಅಲ್ಪಸಂಖ್ಯಾತರಾದುದರಿಂದ ಅವರೂ ಜಾತ್ಯಾತಾತರಾಗಿದ್ದಾರೆ(ಎಲ್ಲಾ ಅಲ್ಪಸಂಖ್ಯಾತರೂ ಜಾತ್ಯಾತೀತರು. ಅಲ್ಪಸಂಖ್ಯಾತರಿಗೆ ಮಾತ್ರ ಬೆಂಬಲ ನೀಡಿ, ಬಹುಸಂಖ್ಯಾತರನ್ನೆಲ್ಲಾ ವಿರೋಧಿಸುವ ಹಿಂದುಗಳೂ ಜಾತ್ಯಾತೀತರು. ರಾಷ್ಟ್ರೀಯತೆಯ ಪರವಿರುವ ಹಿಂದುಗಳು ಮಾತ್ರ ಕೋಮುವಾದಿಗಳೆಂಬುದು ಜಾತ್ಯಾವ್ಯಾಧಿ ನಿಯಮ). ಹೀಗಾಗಿ, ಕರ್ನಾಟಕದಲ್ಲೂ 'ಪ್ರಖರ' ಜಾತ್ಯಾತೀತ ವ್ಯಾಧಿಗಳಿದ್ದಾರೆಂದು ಜಾತ್ಯಾತೀತವ್ಯಾಧಿಗಳಿಗೆ ಸಂತಸವಾಗಿದೆ. ಆದರೆ, ಅದೇ ವೇಳೆ ಅವರನ್ನು ಬಂಧಿಸಿದ ಕೋಮುವಾದಿ ಪೊಲೀಸರ ಮೇಲೆ ಜಾತ್ಯಾತೀತವ್ಯಾಧಿಗಳು ಕೆಂ?ಡಕಾರಿದ್ದಾರೆ.
ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಸರಿಯಾದ ರಕ್ಷಣೆ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

No comments: